ಆ ಸಂಜೆ ನಾನು ಸುಮ್ಮ್ಮನೆ ಕುಳಿತಿದ್ದೆ
ನಿನ್ನನ್ನು ಕಾಯುತ್ತಾ ನಿನ್ನ ನಗುವನ್ನು ನೆನಪಿಸಿಕೊಂಡು
ನಿನಗಾಗಿ ಒಂದು ಉಂಗುರ ಮಾಡಿದ್ದೆ, ಬರೀ ಕಾಗದದಿಂದ
ನಗಬೇಡ... ನಗುವೆಯೇಕೆ? ನನ್ನ ಹುಚ್ಚುತನ ಗೊತ್ತಿರುವುದು ನಿನಗಷ್ಟೆ
ಆ ಉಂಗುರ ಬಿಡಿಸುವೆ ನೀನೆಂದು ನನಗೆ ಗೊತ್ತು
ಘಾಬರಿ ಏಕೆ? ಅದೇನು ಪ್ರೇಮ ಪತ್ರವೇ?
ಹಮ್, ನಾನಾಗೆ ಏಕೆ ಹೇಳಲಿ? ನಿನ್ನ ಕುತೂಹಲವನೇಕೆ ಕೊಲ್ಲಲಿ?
ಇಲ್ಲ, ನಾನೇನು ನಗುತಿಲ್ಲಾ. ಹೌದು, ನನಗೇನು ಗೊತ್ತಿಲ್ಲ.
ನಾವಿಬ್ಬರೂ ಕೇವಲ ಗೆಳೆಯ ಗೆಳತಿಯರು ಅಷ್ಟೇ
ಅದು ನನಗೆ ಗೊತ್ತು
ಆದರೆ ಆ ಸಂಜೆ ಬೇರೆಯದಾಗಿತ್ತು
ನನ್ನ ಪಾಲಿಗೇಕೆ ಬಂದಿತ್ತೋ ನಾ ಕಾಣೆ
ನಿನ್ನನೇಕೆ ದೂಶಿಸಲಿ? ಆ ಸಿಹಿ ಸಂಜೆಯನ್ಹೇಗೆ ಸಾಯಿಸಲಿ
ನದಿಯ ನೀರನರಸಿ ಹೊರಟಿರುವೆ
ದಡಕೆ ನೀರೇ ಸೇರಿಸಿದಾಗ ಬರುವೆ
ಕಾಯುವೆಯಾ ನನ್ನ ಗೆಳತಿ?
ಕುಳಿತು ಈ ದಡದಿ ಮತ್ತೊಂದು ಸಂಜೆ...

No comments:
Post a Comment